February 17, 2011

ನಿಮ್ಮ ಜೊತೆ, ಮತ್ತೊಮ್ಮೆ!

ಬ್ಬ! ಎಂಥ ಎನರ್ಜಿ ಬೇಕು ಅಲ್ವ, ಈ ಜಿಂದಗಿಯಲ್ಲಿ. ಪ್ರತಿ ದಿನವೂ, ಪ್ರತಿ ಕ್ಷಣವೂ. ಯಾಮಾರುವ ಹಾಗೇ ಇಲ್ಲ. ನಾಳೆಯ ಖುಷಿಯನ್ನ ನಿರ್ಧರಿಸುವುದು ಈವತ್ತಿನ, ಈ ಹೊತ್ತಿನ ನಿರ್ಧಾರಗಳೇ. ಅದಕ್ಕೆ, ನಾನು ಈ ಬದುಕನ್ನ ನೋಡುವ ದೃಷ್ಟಿ ಕೊಂಚ ಬದಲಾಗಿದೆ. ನಾಳೆಗಳಲ್ಲಿ ನಾನಿರುವುದು ಕಡಿಮೆ! ಒಮ್ಮೆ, ಈ ಕ್ಷಣದಲ್ಲಿ-ಈ ದಿನದಲ್ಲಿ-ಮತ್ತು ಈವತ್ತಿನಲ್ಲಷ್ಟೇ ಬದುಕಿ ನೋಡಿ. ಹಾಗಂದ ಮಾತ್ರಕ್ಕೆ ನಾಳೆಯ ಯೋಚನೆಯೇ ಇರಬಾರದು ಎಂದಲ್ಲ. ಯಾವತ್ತೂ ಆದ್ಯತೆ ಇಂದಿಗಿರಲಿ, ನಾಳೆಗಲ್ಲ. ನಾಳೆ ಎನ್ನುವುದು ಬರೀ ಯೋಚನೆಯಲ್ಲಿ ಬಂದು ಹೋಗಬೇಕಷ್ಟೆ ಹೊರತು, ಅದು ಚಿಂತೆ ಆಗಬಾರದು! ಏನಂತೀರಾ?

2 comments:

  1. ನಾ ಬದುಕುವ ರೀತಿಯೇ ಹಾಗೆ ವಿವೇಕ್ . ಜೀವನ ತುಂಬಾ ಚೆನ್ನಾಗಿರುತ್ತೆ ಹಾಗಿದ್ದರೆ. ನನಗೆ ನಾಳೆ ಯಾವತ್ತಿಗೂ ಚಿಂತೆಯಾಗಿಲ್ಲ. ಹಾಗಂತ ಯೋಚನೆಗಳನ್ನು ಬಿಟ್ಟಿಲ್ಲ. ಈ ಕ್ಷಣದ ಬದುಕು ನನ್ನದು.. ಹಾಗೆಯೇ ಬದುಕಿ ಚೀರ್ಸ್...........

    ReplyDelete