April 2, 2012

ನನ್ನೊಳಗೆ

ನುಷ್ಯ ಸೋಲುವುದೇ ಆವಾಗ. ಯಶಸ್ಸು ತಲೆಗೆ ಹತ್ತಿದಾಗ.ಅದನ್ನ ಯಾವತ್ತೂ  ಕೈಯಲ್ಲಿ ಹಿಡಿದಿಟ್ಟುಕೊಂಡವನೇ ಬುಧ್ಧಿವಂತ. ತಲೆಗೆ ಮೆತ್ತಿಕೊಂಡರೆ ಖತಂ.

ಹೋಗ್ಲಿ ಬಿಡಿ, ಇತ್ತೀಚಿಗೆ ಈ ಬ್ಲಾಗಿಂಗು , ಪೇಂಟಿಂಗ್, ಸಿಂಗಿಂಗು ಯಾವುದರಮೆಲೂ ಮೊದಲಿನಷ್ಟು ಗುಂಗಿಲ್ಲ.ಎಲ್ಲ ಬತ್ತಿಹೋಗಿದೆ. ಬಿರು ಬೇಸಿಗೆ ಬೇರೆ. ಯಾವುದೋ ಛತ್ರಿ ಕೆಲಸಕ್ಕಾಗಿ ಆಚೆ ಛತ್ರಿ ಇಲ್ಲದೆ ಹೋದಾಗ ಬರುವ ಸಣ್ಣ ಮಳೆಗಾಗಿ ಒಂದಷ್ಟು ತವಕ. ಉತ್ಸಾಹ ಮೊಳಕೆಯೊಡೆಯಬಹುದೇನೋ ಎನ್ನುವ ಆಸೆಯಷ್ಟೇ!

ಜಿಂದಗಿ ಒಂಥರಾ ಬೇಕಾಬಿಟ್ಟಿಯಾಗಿ ಓಡುತ್ತಿದೆ.ಲಂಗು-ಲಗಾಮಿಲ್ಲದೆ.ಒಮ್ಮೊಮ್ಮೆ ಈವತ್ತು ಯಾವ ವಾರ, ಡೇಟ್ ಯಾವುದಪ್ಪ ಅಂತ ನನ್ನ ಕೈಗಡಿಯಾರವನ್ನೋ, ಮೊಬೈಲನ್ನೋ ಇಲ್ಲ ಲ್ಯಾಪ್ಟಾಪ್ನನ್ನೊ ಕೇಳುವಷ್ಟರಮಟ್ಟಿಗೆ ಉಧ್ಧಾರವಾಗುತ್ತಿದ್ದೇನೆ. ಸಿಕ್ಕಾಪಟ್ಟೆ ಧೂಳು.ಮನೆಯೊಳಗೂ,ಹೊರಗೂ, ಮನಸ್ಸಿನೊಳಗೂ ಸೇರಿಕೊಂಡಿರಬಹುದೇನೋ ಅಂತ ಸಂಶಯ!
ಒಂದು ಸ್ವಲ್ಪ ಜೀವನೋತ್ಸಾಹ ಬೇಕು ಅನಿಸುತ್ತಿದೆ. ಎಲ್ಲಿ ಸಿಗಬಹುದು? ನನ್ನೋಳಗಾ? ಇಲ್ಲ, ನಿಮ್ಮೊಳಗಾ?

2 comments:

  1. ಜೀವನೋತ್ಸಹಕ್ಕಾಗಿ ಹುಡುಕ ಬೇಕಾಗಿಲ್ಲ ವಿವೇಕ್. ಅದು ನಮ್ಮಲ್ಲೇ ಹರಿಯುವ ಗುಪ್ತಗಾಮಿನಿ.. ಇಂದಲ್ಲ ನಾಳೆ ನೀವು ಬೆಳ್ಳಿಗ್ಗೆ ಎದ್ದು ಮೈ ಮುರಿಯುವಷ್ಟರಲ್ಲೇ ಅಲೆ ಅಲೆಯಾಗಿ, ಬತ್ತದ ಸೆಲೆಯಾಗಿ ಉಕ್ಕಬಹುದು.. ಚಂದದ ಪುಟ್ಟ ಲೇಖನ. ತುಂಬಾ ಇಷ್ಟವಾಯಿತು..

    ReplyDelete
    Replies
    1. Hey thanks! Yeah, this post's title is the answer for my question !!

      Delete